ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ.
ಬೈಬಲ್ ಅನ್ನು ಓದಿರಿ: 40ಕ್ಕೂ ಹೆಚ್ಚಿನ ಭಾಷೆಗಳ ನಿಮ್ಮ ಆಯ್ಕೆಗಾಗಿ ಬೈಬಲ್ ಅಪ್ಲಿಕೇಷನ್ನಿನ ಇಂಟರ್‌ಫೇಸ್ ಅನ್ನು ನಿಗದಿಗೊಳಿಸಿ. 100ಕ್ಕೂ ಹೆಚ್ಚಿನ ಭಾಷೆಗಳಲ್ಲಿ ನೂರಾರು ಬೈಬಲ್ ಆವೃತ್ತಿಗಳಿಂದ ಸುಲಭವಾಗಿ ಆಯ್ಕೆ ಮಾಡಿಕೊಳ್ಳಿ. ಆಫ್‌ಲೈನ್ ಬೈಬಲ್‌ಗಳು: ನೆಟ್‌ವರ್ಕ್ ಪ್ರವೇಶವಿಲ್ಲದೆಯೂ ಓದಬಹುದು. ಆಡಿಯೋ ಬೈಬಲ್‌ಗಳನ್ನು ಆಲಿಸಿ ಮತ್ತು ಹೊಚ್ಚಹೊಸ ಸ್ಕಿಪ್, ಪ್ಲೇಬ್ಯಾಕ್ ವೇಗ, ಮತ್ತು ಟೈಮರ್ ನಿಯಂತ್ರಣಗಳನ್ನು ಸವಿಯಿರಿ. ಬೈಬಲ್ ಅಪ್ಲಿಕೇಷನ್‌ನಲ್ಲಿ ಪರಸ್ಪರ ಸ್ನೇಹಗಳ ಸಹಾಯದಿಂದ ನಿಮ್ಮ ನಿಕಟ ಸಂಬಂಧಿಗಳ ಮಧ್ಯೆ ಬೈಬಲ್ ಅನ್ನು ಇಡಿ. ಟಿವಿ ಮಿನಿಸರಣಿಗಳಿಂದ ‘ದಿ ಬೈಬಲ್’, ಜಗತ್ತನ್ನು ಬದಲಿಸಿದ ‘ಜೀಸಸ್’ ಚಲನಚಿತ್ರ, ಹಾಗೂ ‘ದಿ ಲುಮೊ ಪ್ರಾಜೆಕ್ಟ್’ ನಿಂದ ತುಣುಕುಗಳನ್ನು ವೀಕ್ಷಿಸಿ.’
ಇಂದು, ನಮ್ಮ ಪಾಲುದಾರ OneHope ರೊಂದಿಗೆ, ಕನ್ನಡ ಭಾಷೆಯಲ್ಲಿ ಮಕ್ಕಳಿಗಾಗಿ ಬೈಬಲ್ ಆ್ಯಪ್ ನ ಪ್ರಾರಂಭವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಈಗ, ಹಿಂದೆಂದಿಗಿಂತಲೂ ಹೆಚ್ಚಿನ ಮಕ್ಕಳಿಗೆ ತಮ್ಮದೇ ಆದ ಬೈಬಲ್ ಅನುಭವವನ್ನು ಆನಂದಿಸಲು ಅವಕಾಶವಿದೆ.
ಆ್ಯಪ್ ಸೆಟ್ಟಿಂಗ್‌ಗಳಲ್ಲಿ ಭಾಷೆಗಳನ್ನು ಬದಲಾಯಿಸುವುದು ಸುಲಭ:
ಆಡಿಯೋ ಈಗ ಆ ಭಾಷೆಯಲ್ಲಿ ಪ್ಲೇ ಆಗುತ್ತದೆ, ಮತ್ತು ಅದೇ ಭಾಷೆಯಲ್ಲಿ ವಾಕ್ಯಗಳೂ ಕಾಣಿಸುತ್ತವೆ!
ಈ ಶ್ರೇಷ್ಟ ಸುದ್ದಿಯನ್ನು ಆಚರಿಸಲು ದಯವಿಟ್ಟು ನಮಗೆ ಸಹಾಯ ಮಾಡಿ!
ಮಕ್ಕಳಿಗಾಗಿ ಬೈಬಲ್ ಆ್ಯಪ್ ಬಗ್ಗೆ
OneHope, ಮಕ್ಕಳಿಗಾಗಿ ಬೈಬಲ್ ಆ್ಯಪ್ ರ ಸಹಭಾಗಿತ್ವದಲ್ಲಿ YouVersionರವರಿಂದ, ಬೈಬಲ್ ಅಪ್ಲಿಕೇಶನ್ತಯಾರಕರಿಂದ ಅಭಿವೃದ್ಧಿಪಡಿಸಲಾಗಿದೆ. ಮಕ್ಕಳಿಗೆ ಸಂತೋಷದಿಂದ ತುಂಬಿದ ಬೈಬಲ್ ಅನುಭವವನ್ನು ನೀಡಲು ವಿನ್ಯಾಸಗೊಂಡಿರುವ ಮಕ್ಕಳಿಗಾಗಿ ಬೈಬಲ್ ಆಪ್ ಈಗಾಗಲೇ 34 ಮಿಲಿಯನ್ ಆಪಲ್, ಆಂಡ್ರಾಯ್ಡ್ ಮತ್ತು ಕಿಂಡಲ್ ಸಾಧನಗಳಲ್ಲಿ ಇನ್ ಸ್ಟಾಲ್ ಆಗಿದೆ, ಮತ್ತು ಇದು ಯಾವಾಗಲೂ ಸಂಪೂರ್ಣವಾಗಿ ಉಚಿತವಾಗಿದೆ. ಪ್ರಪಂಚದಾದ್ಯಂತದ ಮಕ್ಕಳು ಈಗ 50 ಭಾಷೆಗಳಲ್ಲಿ ಮಕ್ಕಳಿಗಾಗಿ ಬೈಬಲ್ ಆಪ್ ಅನ್ನು ಆನಂದಿಸುತ್ತಿದ್ದಾರೆ – ಈಗ ಕನ್ನಡ ಭಾಷೆಯು ಸೇರ್ಪಡೆಯಾಗಿದೆ!
![]() |
![]() |
![]() |
1
ಕೇಡು ಮಾಡುವವರ ನೋಡಿ ಸಿಡಿಮಿಡಿಯಾಗಬೇಡ I ದುರಾಚಾರಿಗಳ ಕಂಡು ಮಚ್ಚರಗೊಳ್ಳಬೇಡ II
2
ಅವರು ಒಣಗಿಹೋಗುವರು ಕಾಡುಗರಿಕೆಯಂತೆ I ಬೇಗ ಬಾಡಿಹೋಗುವರು ಕಾಯಿಪಲ್ಯದಂತೆ II
3
ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು I ಸುರಕ್ಷಿತನಾಗಿ ಬಾಳು ಸಿರಿನಾಡಿನಲ್ಲಿದ್ದು II
4
ಪ್ರಭುವಿನಿಂದಲೆ ಬಯಸು ನಿನ್ನಾನಂದವನು I ನೆರವೇರಿಸುವನಾತ ನಿನ್ನ ಮನದಾಸೆಯನು II
5
ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು I ಭರವಸೆಯಿಂದಿರು, ಆತನದನು ಸಾಗಿಸುವನು II
6
ಬೆಳಗಿಸುವನು ನಿನ್ನ ಸತ್ಯಸಂಧತೆಯನು ಸೂರ್ಯೋದಯದಂತೆ I ಪ್ರಕಟಿಸುವನು ನಿನ್ನಾ ನ್ಯಾಯನಿಷ್ಠೆಯನು ನಡುಹಗಲಿನಂತೆ II
7
ಪ್ರಭುವಿನ ಮುಂದೆ ಪ್ರಶಾಂತನಾಗಿರು, ಆತನಿಗೋಸ್ಕರ ಕಾದಿರು I ಸ್ವಾರ್ಥಿಗಳ, ಕುತಂತ್ರಿಗಳ ಏಳಿಗೆಯ ಕಂಡು ಉರಿಗೊಳ್ಳದಿರು II
8
ಅಡಗಿಸು ಕೋಪವನು; ವರ್ಜಿಸು ಕ್ರೋಧವನು I ಕಿಡಿಕಿಡಿಯಾಗಬೇಡ, ತರುವುದದು ಕೇಡನು II
9
ವಧಿತರಾಗಿ ನಾಶವಾಗುವರು, ಕೇಡು ಮಾಡುವವರು I ಪ್ರಭುವಿಗಾಗಿ ಕಾಯುವವರು ನಾಡಿಗೊಡೆಯರಾಗುವರು II
10
ದುರುಳನು ಕಾಣದೆ ಹೋಗುವನು ಕೊಂಚಕಾಲದೊಳು I ಹುಡುಕಿದರು ಕಾಣಸಿಗನಾಗ ಊರು ಕೇರಿಗಳೊಳು II
11
ದೀನದಲಿತರು ಬಾಧ್ಯಸ್ಥರಾಗುವರು ನಾಡಿಗೆ I ಆನಂದಿಸುವರು ಅಲ್ಲಿ ದೊರಕುವ ಸುಖಶಾಂತಿಗೆ II